Supreme Control

ಪುರುಷ-ಪ್ರಕೃತಿಯಲ್ಲಿ ಎರಡು ಬಗೆಯ ಕಂಟ್ರೋಲ್ ಇದೆ. 
✔️ಕರ್ಮವು ಮಿತಿಮೀರಿದರೆ ಪುರುಷನಿಗೆ ಹೇಗೆ ದಂಡನೆ ಮಾಡಬೇಕು ಅಂತ ಗೊತ್ತಿದೆ !
✔️ಪ್ರಕೃತಿಯ ಭೋಗಗಳ ಮೇರೆ ಮೀರಿ ಮೆರೆದು ಲೋಕವೆಲ್ಲಾ ☢️ +700 ಕೋಟಿ ಜನಸಾಗರ ಮಾಡಿದ್ದನ್ನು – ಇವರನ್ನೆಲ್ಲಾ ಹೇಗೆ “ವ್ಯಸ್ತ-ಬಿಝಿ” ಇಡಬೇಕು ಅಂತ ಗೊತ್ತಿದೆ !

    ದಂಡಧರೋ ಕಾಲ: 
ವಿಭ್ರಮಕಾರೀ ಚ ಪ್ರಕೃತಿ:
..ಎಂಬಂತೆ – ಮನುಷ್ಯರ ಅತಿಯಾದ ಕರ್ಮಸಂಘವನ್ನು ನಾನಾ ಗೌಜುಗಳಿಂದ ಪ್ರಕೃತಿ-ಪುರುಷರು ಹಾಳುಗೆಡವುತ್ತಾರೆ !

ಅದೇ ಲೋಕವೆಲ್ಲಾ ಆಗ್ತಾ ಇರೋದು ಕೂಡಾ.

ಸ್ವಾರ್ಥಹೇಸಿಗೆಯ ಅಧಿಕಾರ ಮೋಹದಿಂದ
ಯುದ್ಧದಾಹ-ಅದರ ಭೀತಿ-ಅದಕ್ಕೆ ಸನ್ನದ್ಧವಾಗುವ ಅವಸರ-ಆತಂಕ , ಇದು ಉಂಟುಮಾಡುವ ಅಸ್ತ್ರ ಶಸ್ತ್ರ ಪೇರುಗಳು , ಇದನ್ನು ಬಳಸಬೇಕು ಎಂಬೋ ಮಾನಸಿಕ ಧಾವಂತ , ಇದನ್ನ ತನ್ನಿಚ್ಛೆಯಂತೆ ಬಳಸಲಾಗದ ಹಪಹಪಿ ಮಾನಸಿಕ ವಿಕಲತೆ ,  
    …ಇದೆಲ್ಲ ಒಂದೆಡೆಯಾದರೆ –

    ಶೀತ ವಾತ ಅಗ್ನಿಗಳ ಉಬ್ಬರದಿಂದ ಸಾಗರಗಳ ಕಂಪನ , ಮೇಘಸ್ಫೋಟ , ಮಹಾಮಳೆ , ಪ್ರವಾಹ , ಆಹಾರಾಧಾನ್ಯಗಳ ಕೊರತೆ , ಸಮಸ್ತವ ಜಲಬಂಧನವ ಮಾಡಿಡುವ ಅದಟು !
….ಇದೆಲ್ಲಾ ಇನ್ನೊಂದೆಡೆ ಆದರೆ ,
ಏತನ್ಮಧ್ಯೆ ರೋಗ ರುಜಿನ ಸಾಂಕ್ರಾಮಿಕ ಕಾಯಿಲೆಗಳು , ಅದರಿಂದ ಕೊನೆಯಿರದ ಪರದಾಟ…
..ಸಕಲವ ಅಲ್ಲೋಲ ಕಲ್ಲೋಲ ಮಾಡುತ್ತಾ ಈ ಪಾಟಿ ಜನರನ್ನು ಅವರ ಅದೇ ಕರ್ಮಫಲಗಳಲ್ಲಿ ಅಸ್ತವ್ಯಸ್ತ ಬಿಝಿ ಇಡುವಳು !

ಇಷ್ಟೂ ಪ್ರಕೃತಿ-ಪುರುಷರು ಒಂದೇ ಸಮ ಮಾಡುತ್ತಾ ಹೋಗುವರು !

ಯಾಕೆ ?!

     🖐️ ತಡೆಯಿರಿ ! ಸಲ್ಪ ನಿಲ್ಲಿ ! ಸುತ್ತಲ ಜಗವ ನೋಡಿ ! ನಿಮ್ಮ ಅಳ ಏನಿದೆ 🤔‼️…ವಿಚಾರ ಮಾಡಿ !
ಇದೆಲ್ಲವೂ ನಮ್ಮ ವಿಕಾರ ಅಲ್ಲ.
ನಿಮ್ಮದೇ ವಿಚಾರರಹಿತ ಕರ್ಮಗಳ ಫಲ , ನಾವು ಅದನ್ನು ನಾನಾ ರೀತಿಯಲ್ಲಿ ತಿಳಿಸಿ ಹೇಳುವದನ್ನು ಮನುಷ್ಯ ಸಮೂಹ ” ಒಬಿಡಿಯಂಟ್ ” ಆಗಿ ಕೇಳಿಸಿಕೊಳ್ಳಲಿಲ್ಲ.

      ನಾವು ಅನುಕೂಲ ಕೊಟ್ಟದ್ದನ್ನು , ಯಾರು ಏನು ಅಂತ ಯೋಚಿಸದೇ ನಿಮ್ಮದೇ ” ಸ್ವಂತ ” ಅಂತ 
ಮೇರೆ ಮೀರಿ ಹರಡಿದೀರಿ. ಶಾಂತಿ-ಅಹಿಂಸೆ-ಸುಖ ಬಾಳುವೆಗೆ ನಾವು ಯಾವ ಕೊರತೆಯೂ ಎಂದೂ ಕಡಿಮೆ ಮಾಡೋಲ್ಲ.
..ನಿಮಗದು ಅರ್ಥವಾಗಿಲ್ಲ.

ಘೋರವಾಗಿ ವಿಪರೀತವಾಗಿ ಬೆಳೆದು ಸೆಟೆದು ನಿಂತಿರುವಿರಿ ☹️

ಇದನ್ನು ನಿಯಂತ್ರಿಸೋದು ನಮ್ಮ ಕರ್ತವ್ಯ , ಅನ್ಯರಾರೂ ಈ ಜಗತ್ತಿಗೆ ಯಾವ ಕಾಲದಲ್ಲೂ ಯಾರೂ “ನಾಥ ” ರು ಇಲ್ಲ.
       ..ಮಯಾಧ್ಯಕ್ಷೇಣ ಪ್ರಕೃತಿರ್ ಸೂಯತೇ ಸಚರಾಚರಮ್…
..ಮತ್ತ: ಪರತರಂ ನಾಸ್ತಿ ಕಿಚಿಂತ್ ಧನಂಜಯ…

   ಶ್ರೀಗೀತೆಯಲ್ಲಿ ಹೇಳದ ಯಾವ ವಸ್ತು ವಿಷಯವೂ ಇಲ್ಲ. ಸರ್ವಲೋಕ ಸಾರ್ವಕಾಲಿಕ ಸತ್ಯವನ್ನು ಇದಂ ಇತ್ಥಮ್ ಎಂದು ಶ್ರೀಗೀತೆ ಸಾರುತ್ತಿದೆ…ಸ್ವತಃ ಆದಿಪುರುಷನೇ ಸಾರಿದ ಮಹತ್ತರ ವಿಜ್ಞಾನ ಅದು…ಅದಕೇ ಅದು “ಭಗವದ್ಗೀತೆ ” ಎನಿಸಿದೆ ‼️

    ಯುದ್ಧ-ಭಯೋತ್ಪಾದನೆ-ಅಸ್ತ್ರ ಶಸ್ತ್ರ ವಿಕಿರಣಗಳು-ನಾನಾ ರೋಗ ರುಜಿನಗಳಿಂದ ಪ್ರಕೃತಿಯ ರಮ್ಯಶುದ್ಧತೆಗೆ ಎಂದೆಂದು ಘಾಸಿ ಆಗುವುದೋ…ಆಗೆಲ್ಲವೂ ಆ ಪುರುಷನು ದಂಡಧರನಾಗಿ ಶಾಸನ ಮಾಡುವ.

ಇದಕ್ಕೆ ಯಾವ ಸಂದೇಹವೂ ಇಲ್ಲ.

   ..ಭಯಕೃದ್ ಭಯ ನಾಶನಃ 🙏

🌻 ದೈವಜ್ಞ. ಹರೀಶ್ ಕಾಶ್ಯಪ